ಇತ್ತ ಮಹಾರಾಷ್ಟ್ರ - ಅತ್ತ ಕರ್ನಾಟಕ
ಅಕ್ಕ-ಪಕ್ಕ ರಾಜ್ಯಗಳಲ್ಲಿ ಕುರ್ಚಿಗಾಗಿ ಕಾದಾಟ
ಇಲ್ಲಿ ಹತ್ತಾರು ಸಮಸ್ಯೆಗಳು ಅಲ್ಲಿ ನೂರಾರು 
ವಿಶೇಷವಾಗಿ ನೆರೆಯ ಪರಿಹಾರದ ಬರ ಅಲ್ಲಿ
ಬರದ ಪರಿಹಾರದ ಬರವೇ ಇಲ್ಲಿ
ರೆಡ್ಡಿ-ಯಡ್ಡಿಗಳ ನಡುವೆ ಬಂದರು ಶೆಟ್ಟರ್
ಚವ್ಹಾನ್-ಭುಜಬಲಗಳ ನಡುವೆ ಬಂದರು ಪವಾರ್
ಅಲ್ಲಿ ಗಣಿ ಧಣಿ ಹಿಡಿದ್ದಿದ್ದಾರೆ ಹಠ 
ಇಲ್ಲಿ ಕುರ್ಚಿ ಧಣಿ ಹಿಡಿದ್ದಿದ್ದಾರೆ ಸತ್ಯಸಾಯಿ ಮಠ
ಅದೋ southern discomfort 
ಇದೋ maha deadlock 
ಅತ್ತ ನೆರೆ ಪರಿಹಾರದ ಕೆಲಸ ಸಾಗುತ್ತಿಲ್ಲ 
ಇತ್ತ ಸರ್ಕಾರಿ ಖರ್ಚಿನಲ್ಲಿದ್ದಾರೆ ಬಾಬಾ ಪದತಲದಲ್ಲಿ
"ವರ್ಷ"ಕ್ಕಾಗಿ ಇಲ್ಲಿಲ್ಲ ಹರ್ಷ 
"ಕೃಷ್ಣ"ಕ್ಕಾಗಿ ಅಲ್ಲೆಲ್ಲ ತೃಷ್ಣ
ಎರಡೂ ಕಡೆ ರಾಜಕೀಯ ದೊಂಬರಾಟ 
ಶ್ರೀಸಾಮಾನ್ಯನಿಗೆ ಬೇಕಿಲ್ಲ ಈ ಮಹಾ ನಾಟಕ 
 
 
No comments:
Post a Comment